Podcasts by Category

Quran In Kannada

Quran In Kannada

Quran Kannada Podcast

This is Quran translated to Kannada by Abdussalam Puthige. This is noted for its simple language, lucid style and for its strict loyalty to the original text. He has also voiced the same. The first edition of this translation was published in August 2012 by Madhyama Prakashana, Bangalore. Note: This podcast is created by downloading the audio from the android app "Quran in Kannada" https://play.google.com/store/apps/details?id=com.nzymic.kquran

114 - Surah 114 An-Nas ಅಧ್ಯಾಯ 114: ಅನ್ನಾಸ್ (ಮಾನವರು)
0:00 / 0:00
1x
  • 114 - Surah 114 An-Nas ಅಧ್ಯಾಯ 114: ಅನ್ನಾಸ್ (ಮಾನವರು)

    ಅಧ್ಯಾಯ 114: ಅನ್ನಾಸ್ (ಮಾನವರು) ಸೂಕ್ತ : 1 ಹೇಳಿರಿ; ನಾನು ಮಾನವರ ಒಡೆಯ (ಅಲ್ಲಾಹ)ನಲ್ಲಿ ರಕ್ಷಣೆ ಕೋರುತ್ತೇನೆ. ಸೂಕ್ತ : 2 ಅವನು (ಅಲ್ಲಾಹನು) ಮಾನವರ ದೊರೆ, ಸೂಕ್ತ : 3 ಮಾನವರ ಆರಾಧ್ಯ. ಸೂಕ್ತ : 4 (ಮನಸ್ಸಿನಲ್ಲಿ) ಗೊಂದಲ ಬಿತ್ತಿ ಹಿಂದೆ ಸರಿದು ಬಿಡುವವನ (ಶೈತಾನನ) ಕೆಡುಕಿನಿಂದ (ನಾನು ಅಲ್ಲಾಹನ ರಕ್ಷಣೆ ಕೋರುತ್ತೇನೆ). ಸೂಕ್ತ : 5 ಅವನು ಮಾನವರ ಮನದಲ್ಲಿ ಗೊಂದಲಗಳನ್ನು ಬಿತ್ತುತ್ತಾನೆ. ಸೂಕ್ತ : 6 ಅಂಥವನು ಜಿನ್ನ್‌ಗಳ ಪೈಕಿ ಇರಬಹುದು ಮತ್ತು ಮಾನವರ ಪೈಕಿಯೂ ಇರಬಹುದು. (via) Quran in Kannada(ಕನ್ನಡದಲ್ಲಿ ಕುರ್ ಆನ್) app https://play.google.com/store/apps/details?id=com.nzymic.kquran

    Wed, 14 Apr 2021 - 01min
  • 113 - Surah 113 Al-Falaq ಅಧ್ಯಾಯ 113: ಅಲ್ ಫಲಕ್(ಮುಂಜಾವು)

    ಅಧ್ಯಾಯ 113: ಅಲ್ ಫಲಕ್(ಮುಂಜಾವು) ಸೂಕ್ತ : 1 ಹೇಳಿರಿ; ನಾನು, ಪ್ರಭಾತದ ಒಡೆಯ (ಅಲ್ಲಾಹ)ನಲ್ಲಿ ರಕ್ಷಣೆ ಕೋರುತ್ತೇನೆ - ಸೂಕ್ತ : 2 ಅವನು ಸೃಷ್ಟಿಸಿರುವ ಎಲ್ಲವುಗಳ ಕೆಡುಕಿನಿಂದ (ಸುರಕ್ಷಿತನಾಗಿರಲು) ಸೂಕ್ತ : 3 ಮತ್ತು ಕತ್ತಲೆಯು ಆವರಿಸುವಾಗ, ಅದರ ಕೆಡುಕಿನಿಂದ (ರಕ್ಷಣೆ ಕೋರುತ್ತೇನೆ) ಸೂಕ್ತ : 4 ಮತ್ತು ಗಂಟುಗಳಲ್ಲಿ ಊದುವ (ಮಂತ್ರವಾದಿ) ಮಹಿಳೆಯರ ಕೆಡುಕಿನಿಂದ ಸೂಕ್ತ : 5 ಮತ್ತು ಅಸೊಯೆ ಪಡುವವನು ಅಸೊಯೆ ಪಡುವಾಗ, ಅವನ ಕೆಡುಕಿನಿಂದ (ರಕ್ಷಣೆ ಕೋರುತ್ತೇನೆ). (via) Quran in Kannada(ಕನ್ನಡದಲ್ಲಿ ಕುರ್ ಆನ್) app https://play.google.com/store/apps/details?id=com.nzymic.kquran

    Wed, 14 Apr 2021 - 00min
  • 112 - Surah 112 Al-Ikhlas ಅಧ್ಯಾಯ 112: ಅಲ್ ಇಖ್ಲಾಸ್ (ಏಕಾಗ್ರತೆ)

    ಅಧ್ಯಾಯ 112: ಅಲ್ ಇಖ್ಲಾಸ್ (ಏಕಾಗ್ರತೆ) ಸೂಕ್ತ : 1 ಹೇಳಿರಿ; ಅವನು ಅಲ್ಲಾಹು ಏಕಮಾತ್ರನು (ಅದ್ವಿತೀಯನು) ಸೂಕ್ತ : 2 ಅಲ್ಲಾಹನು ಎಲ್ಲ ಅಗತ್ಯಗಳಿಂದ ಮುಕ್ತನು. ಸೂಕ್ತ : 3 ಅವನಿಗೆ ಯಾರೂ ಜನಿಸಿಲ್ಲ ಅವನು ಯಾರಿಗೂ ಜನಿಸಿದವನಲ್ಲ. ಸೂಕ್ತ : 4 ಯಾರೂ ಅವನಿಗೆ ಸರಿಸಾಟಿಯಾಗಲು ಸಾಧ್ಯವಿಲ್ಲ. (via) Quran in Kannada(ಕನ್ನಡದಲ್ಲಿ ಕುರ್ ಆನ್) app https://play.google.com/store/apps/details?id=com.nzymic.kquran

    Wed, 14 Apr 2021 - 00min
  • 111 - Surah 111 Al-Lahab ಅಧ್ಯಾಯ 111: ಅಲ್ ಲಹಬ್ (ಜ್ವಾಲೆ)

    ಅಧ್ಯಾಯ 111: ಅಲ್ ಲಹಬ್ (ಜ್ವಾಲೆ) ಸೂಕ್ತ : 1 ಮುರಿದು ಹೋದವು, ಅಬೂಲಹಬ್‌ನ ಎರಡೂ ಕೈಗಳು ಮತ್ತು ಅವನು ನಾಶವಾದನು. ಸೂಕ್ತ : 2 ಅವನ ಸಂಪತ್ತಿನಿಂದಾಗಲಿ ಸಂಪಾದನೆಯಿಂದಾಗಲಿ ಅವನಿಗೆ ಯಾವುದೇ ಲಾಭವಾಗಲಿಲ್ಲ, ಸೂಕ್ತ : 3 ಬೇಗನೇ ಅವನು ಜ್ವಾಲೆಯುಗುಳುವ ಬೆಂಕಿಯನ್ನು ಪ್ರವೇಶಿಸುವನು, ಸೂಕ್ತ : 4 ಮತ್ತು ಉರುವಲು ಹೊರುವ (ಜನರನ್ನು ಪ್ರಚೋದಿಸುವ) ಅವನ ಮಡದಿ. ಸೂಕ್ತ : 5 ಅವಳ ಕೊರಳಲ್ಲಿ ಖರ್ಜೂರದೆಲೆಯ ಪಾಶವಿರುವುದು. (via) Quran in Kannada(ಕನ್ನಡದಲ್ಲಿ ಕುರ್ ಆನ್) app https://play.google.com/store/apps/details?id=com.nzymic.kquran

    Wed, 14 Apr 2021 - 01min
  • 110 - Surah 110 An-Nasr ಅಧ್ಯಾಯ 110: ಅನ್ನಸ್ರ್ (ಸಹಾಯ)

    ಅಧ್ಯಾಯ 110: ಅನ್ನಸ್ರ್ (ಸಹಾಯ) ಸೂಕ್ತ : 1 ಅಲ್ಲಾಹನ ಸಹಾಯ ಮತ್ತು ವಿಜಯವು ಬಂದಾಗ ಸೂಕ್ತ : 2 ಮತ್ತು ಜನರು ಸಮೂಹಗಳಾಗಿ ಅಲ್ಲಾಹನ ಧರ್ಮದೊಳಗೆ ಪ್ರವೇಶಿಸುವುದನ್ನು ನೀವು ಕಂಡಾಗ, ಸೂಕ್ತ : 3 ನಿಮ್ಮೊಡೆಯನ ಪ್ರಶಂಸೆಯೊಂದಿಗೆ, ಅವನ ಗುಣಗಾನ ಮಾಡಿರಿ ಮತ್ತು ಅವನಿಂದ ಕ್ಷಮೆ ಯಾಚಿಸಿರಿ. ಖಂಡಿತವಾಗಿಯೂ ಅವನು ಪದೇ ಪದೇ ಪಶ್ಚಾತ್ತಾಪ ಸ್ವೀಕರಿಸುವವನಾಗಿದ್ದಾನೆ. (via) Quran in Kannada(ಕನ್ನಡದಲ್ಲಿ ಕುರ್ ಆನ್) app https://play.google.com/store/apps/details?id=com.nzymic.kquran

    Wed, 14 Apr 2021 - 00min
Show More Episodes